ಚಿತ್ತಾ ಜಿನೇಂದ್ರ ಎಂ.ಎಂ ಜೈನ್- ಇವರ ಪರಿಚಯ

ಚಿತ್ರ ಮತ್ತು ಶಿಲ್ಪಕಲಾವಿದರಾದ
ಶ್ರೀ ಎಂ.ಎಂ.ಜಿನೇಂದ್ರ ಜೈನ್- ಬೆಂಗಳೂರು ಇವರ ಪರಿಚಯ
 ಮಲೆನಾಡು ಪ್ರಾಂತ್ಯದ ಸಾಗರ ತಾಲ್ಲೂಕಿನ ಮಳ್ಳೋಡಿ ಗ್ರಾಮದ ಶ್ರೀ.ಮೇಘರಾಜ್ ಮತ್ತು ಶ್ರೀಮತಿ.ಲೀಲಾವತಿ ರವರ ಪುತ್ರರಾದ ಶ್ರೀ ಎಂ.ಎಂ.ಜಿನೇಂದ್ರ ಜೈನ್ ರವರಿಗೆ ಬಾಲ್ಯದಿಂದಲೂ ಚಿತ್ರ ಬರೆಯುವ, ಗೆರೆ ಎಳೆದಾಡುತ್ತಾ ಸುಂದರ ಚಿತ್ರ ಬರೆಯುವ ಅಭಿರುಚಿ ಇದ್ದಿತು. ಇವರ ಹುಟ್ಟಿದೂರಿನ ಪರಿಸರ ಪ್ರಕೃತಿಯು ಬಾಲ್ಯದಿಂದಲೇ ಮನಸ್ಸಿನಲ್ಲಿ ಚಿತ್ರಕಲಾಭಿವ್ಯಕ್ತಿಯನ್ನು ಮೊಳಕೆ ಯೂಡಿಸಿದ್ದವು.ಈಗಿನ ಇವರ ವರ್ಣಚಿತ್ರಗಳಲ್ಲಿ ಇವರ ಹುಟ್ಟಿದೂರಿನ ಪರಿಸರದ ಚಿತ್ರಣಗಳು ಮನಮೋಹಕವಾಗಿ ಬಂದಿವೆ.
ಬಿ.ಎಫ್.ಎ.ಪದವಿ ವ್ಯಾಸಂಗಕ್ಕಾಗಿ ಶಿವಮೊಗ್ಗದ ಶ್ರೀವರ್ಧಮಾನ ವಿದ್ಯಾರ್ಥಿ ನಿಲಯದಲ್ಲಿದ್ದಾಗ ಇವರ ಚಿತ್ರಕಲಾ ಹವ್ಯಾಸಕ್ಕೆ ಉತ್ತಮ ಅವಕಾಶಗಳಾದವು. ಹೀಗಾಗಿ ಶಿವಮೊಗ್ಗದ ಸುಪ್ರಸಿದ್ಧ ಚಿತ್ರಕಲಾವಿದರಾಗಿ “ ವರ್ಣಬ್ರಹ್ಮ” ಎಂಬ ಖ್ಯಾತಿಯ ಶ್ರೀ ಎಸ್.ಆರ್.ವೆಂಕಟೇಶ್ ರವರ  ಚಿತ್ರಕಲಾಭ್ಯಾಸಕ್ಕೆ  ಮಾರ್ಗದರ್ಶನಗಳಾದವು. ಕಲಾಅಭ್ಯಾಸಗಳು ನಿರಂತರಗೊಂಡು ಇವರಲ್ಲಿನ ಚಿತ್ರಕಲಾ ನೈಪುಣ್ಯತೆಯು ಅಭಿವ್ಯಕ್ತಿಗೊಂಡು ಪೂರ್ಣಮಟ್ಟದಲ್ಲಿ ಅನಾವರಣಗೊಳಿಸಿದವು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ “ಜಕಣಾಚಾರಿ ಪ್ರಶಸ್ತಿ” ಪುರಸ್ಕøತರಾದ ಖ್ಯಾತಿಯ ಮಹಾಶಿಲ್ಪಿ ಶ್ರೀ ಕಾಶೀನಾಥ್ ರವರ ನಿಕಟತೆ ಹಾಗೂ ಗುರುಬಾಂಧವ್ಯವು ಇವರನ್ನು ಶಿಲ್ಪಕಲಾವಿದರನ್ನಾಗಿಯೂ ರೂಪಿಸಿತು.
ಹಂಪಿ ಕನ್ನಡ ವಿಶ್ವವಿಧ್ಯಾಲಯದಲ್ಲಿ ಚಿತ್ರಕಲಾಭ್ಯಾಸದೊಡನೆ, ಹಲವು ಖ್ಯಾತ ಚಿತ್ರಕಲಾವಿದರ ಸಂಪರ್ಕದಲ್ಲಿ ಕಲೆಯ ಮೌಲ್ಯಯನ್ನು ಪೂರ್ಣಮಟ್ಟದಲ್ಲಿ ಅರಿತು, ಚಿತ್ರಕಲೆಯಲ್ಲಿ ಪದವಿಪಡೆದು, ವೃತ್ತಿಯಾಗಿಸಿಕೊಂಡು   ಮುಂದುವರೆದರು.
ಈ ಎಲ್ಲಾ ಪರಿಣತೆಯಲ್ಲಿ ಬೆಂಗಳೂರು ಮಹಾನಗರದಲ್ಲಿ ನೆಲೆಗೊಂಡು, ಶಿಲ್ಪ ಮತ್ತು ಚಿತ್ರಕಲಾ ಪ್ರತಿಭೆಯನ್ನು ವಿಶೇಷವಾಗಿ ಬಿಂಬಿಸಿ, ಪ್ರದರ್ಶಿಸಿ ಜನಮನ ಸೂರೆಗೊಂಡಿದ್ದಾರೆ, ಇದಕ್ಕಾಗಿ ಲಗ್ಗೆರೆ ಬಡಾವಣೆಯಲ್ಲಿ “ಚಿತ್ತಾ ಆಟ್ಸ್ ಸ್ಟುಡಿಯೋ” ಸ್ಥಾಪಿಸಿಕೊಂಡು, ತಾವು ಯಶಸ್ಸು ಹೊಂದುತ್ತಾ, ಹಲವಾರು ಉದಯೋನ್ಮುಖ ಕಲಾವಿದರಿಗೂ ಸ್ಫೂರ್ತಿನೀಡಿ ಬೆಂಬಲಿಸುತ್ತಿದ್ದಾರೆ.
  ರೇಖಾಚಿತ್ರ, ವರ್ಣಚಿತ್ರಗಳೊಂದಿಗೆ ಉಬ್ಬುಶಿಲ್ಪ, ಸ್ಥಿರ ಶಿಲ್ಪಗಳನ್ನು ರೂಪಿಸುವ ನಿಟ್ಟಿನಲ್ಲಿ ಪ್ರಾವೀಣ್ಯತೆಗಳಿಸುತ್ತಿದ್ದಾರೆ. ಈ ಪರಿಣಾಮವಾಗಿ ಸಮಾರಂಭಗಳಲಿ,್ಲ ಧಾರ್ಮಿಕ ಮಹೋತ್ಸವಗಳಲ್ಲಿ ವಿಶೇಷ ವರ್ಣಾ-ಕಲಾತ್ಮಕ ವೇದಿಕೆ,ಸೆಟ್ ನಿರ್ಮಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ. ಹಲವು ಚಲನಚಿತ್ರಗಳಿಗೂ ಸಂದರ್ಭೋಚಿತವಾಗಿ ಸೆಟ್ ನಿರ್ಮಿಸಿಕೊಟ್ಟಿರುವುದು ಇವರ ಹೆಗ್ಗಳಿಕೆಯಾಗಿದೆ.
ಸುಮಾರು 8-9 ವರ್ಷಗಳಲ್ಲಿ ಚಿತ್ರ ಮತ್ತು ಶಿಲ್ಪ ಕಲಾಕ್ಷೇತ್ರದಲ್ಲಿ ಅನುಭವದ ದೃಢತೆಯಲ್ಲಿ. ಇತ್ತೀಚಿಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿಏಕವ್ಯಕ್ತಿ” ಚಿತ್ರಕಲಾ ಪ್ರದರ್ಶನ ಏರ್ಪಡಿಸಿ. ಅಪಾರ ನೋಡುಗರ ಮೆಚ್ಚುಗೆಗಳಿಸಿರುತ್ತಾರೆ.

5-6 ವರ್ಷಗಳಿಂದ ಕರ್ನಾಟಕ ಲಲಿತಕಲಾ ಅಕಾಡೆಮಿ ನಿಕಟತೆಯಲ್ಲಿ ಹಲವಾರು ರಾಜ್ಯಮಟ್ಟದ ಕಲಾಶಿಬಿರಗಳಲ್ಲಿ, ಭಾರತೀಯ ವಿದ್ಯಾಭವನವು ಏರ್ಪಡಿಸಿದ್ದ “ಘರ್‍ವಾಲೇ ಆರ್ಟ್‍ಕ್ಯಾಂಪ್” ಹಾಗೂ ಹಲವು ಚಿತ್ರಕಲಾ ಪ್ರದರ್ಶನಗಳಲ್ಲಿ ತಮ್ಮ ಕಲಾಕೃತಿಗಳನ್ನು  ಪ್ರದರ್ಶಿಸಿ, ಪ್ರಶಂಸೆಗಳಿಸಿರುತ್ತಾರೆ.
ಶಿವಮೊಗ್ಗ ಜಿಲ್ಲೆ ಗಾಜನೂರು ನವೋದಯ ಶಾಲೆಯಲ್ಲಿ ಆಯೋಜನೆಗೊಂಡಿದ್ದ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿ ಮೆಚ್ಚುಗೆಗಳಿಸಿರುತ್ತಾರೆ. 2014ರ ಡಿಸೆಂಬರ್‍ನಲ್ಲಿ ಲೀಲಾಪ್ಯಾಲೇಸ್‍ನಲ್ಲಿ ನಡೆದ  ಅಂತಾರಾಷ್ಟ್ರೀಯ ಚಿತ್ರಕಲಾವಿದರೊಂದಿಗೆ ಇವರ ಚಿತ್ರಕಲಾಕೃತಿಗಳು ಪ್ರದರ್ಶಿತಗೊಂಡಿದ್ದು, ಇವರ ಪ್ರಬುದ್ಧ ಕಲಾಪ್ರಾವೀಣ್ಯತೆಗೆ ಸಾಕ್ಷಿಯಾಗಿದೆ, ತುಮಕೂರು ಮಹಾನಗರದಲ್ಲಿ ಡಿ-25ರಂದು ಶ್ರುತ ಮಹಿಳಾ ಜೈನ್ ಮಿಲನ್‍ನ 12ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆದ ಇವರ ವರ್ಣ ಮತ್ತು ರೇಖಾ ಚಿತ್ರಗಳ ಪ್ರದರ್ಶನವು ಅಪಾರ ಜನಮನ್ನಣೆಗಳಿಸಿ ಖ್ಯಾತಿಯ ಮೆಟ್ಟಿಲೇರಲು ಪ್ರೋತ್ಸಾಹದಾಯಕವಾಗಿದ್ದಿತು.
ಜೈನಸಂಸ್ಕಾರ ವಂತಿಕೆಯಲ್ಲಿ ಬೆಳೆದ ಶ್ರೀ ಜಿನೇಂದ್ರರವರಿಗೆ ಜೈನಧರ್ಮದ ಉಳಿವು-ಬೆಳೆವುಗಳಿಗಾಗಿ, ತನ್ನ ಕೊಡುಗೆ ನೀಡುವ ಇಚ್ಛಾಶಕ್ತಿಯಿದೆ. “ತಾನು ಬೆಳೆದು, ಇತರರ ಪ್ರಗತಿಯಲ್ಲಿ ಸಹಕರಿಸುವುದು” ಇವರ ಜೀವನ ನೀತಿಯಾಗಿದೆ.
ಹೀಗಾಗಿ ಸಾಗರ ತಾಲ್ಲೂಕಿನ ಹಲವು ಗೆಳೆಯರನ್ನು ಸಂಘಟಿಸಿಕೊಂಡು “ಪೃಚ್ಛನಾ ಜೈನ್ ಅಸೋಸಿಯೇಷನ್” ಎಂಬ ಸಂಸ್ಥೆಯನ್ನು ಅಸ್ತಿತ್ವಗೊಳಿಸಿದ್ದಾರೆ. ಜೈನ ಪ್ರಾಚೀನ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಈ ನೂತನ ಕಾಲಮಾನದಲ್ಲಿ ವಿಜೃಂಭಿಸಿ, ಧರ್ಮ ಜಾಗೃತಿ ಮೂಡಿಸುತ್ತಾ ಧರ್ಮಕ್ಕೆ ಸೇವೆ ಮಾಡುವ ಧ್ಯೇಯೋದ್ದೇಶವನ್ನೊಂದಿದ್ದಾರೆ. ಈ ಮೂಲಕ 2014ರ ಭಗವಾನ್ ಶ್ರೀ ಮಹಾವೀರಸ್ವಾಮಿ ಜಯಂತ್ಯುತ್ಸವದ ಪ್ರಯುಕ್ತ ಜೈನಲಾಂಛನ, ಸಂಕೇತಗಳ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದು ಉತ್ತಮ ಪ್ರತಿಕ್ರಿಯೆ ಬಂದಿದ್ದಿತು.
ಇತ್ತೀಚೆಗೆ ಸಮೂಹ ಸಮ್ಮಿಲನಕ್ಕೆ ಉತ್ಸುಕತೆ ಹೊಂದಿ, ವಿಶೇಷ ಕಾರ್ಯಚಟುವಟಿಕೆಗಾಗಿ ಶ್ರೀಯುತರು “ಸುಹಾಸ್ತಿ ಯುವ ಜೈನ್ ಮಿಲನ್” ರೂಪುಗೊಳ್ಳಲು ಪ್ರೇರಕರಾಗಿದ್ದಾರೆ. ಉದ್ಘಾಟನೆಗೆ ಮುಂಚೆಯೇ ಕೆಲ ಕಾರ್ಯಕ್ರಮಗಳನ್ನು ನಡೆಸಿ, ಈ ಮಿಲನ್ ಶಾಖೆ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪುಟ್ಟೇನಹಳ್ಳಿಯ ಪಂಚಕಲ್ಯಾಣ ಇತ್ಯಾದಿ ಜೈನ ಕಾರ್ಯಕ್ರಮಗಳಲ್ಲಿ ಇವರು ಅಪೂರ್ವ ಕಲಾಕೃತಿಗಳಿಂದ ಚೆಂದದ ವೇದಿಕೆಗೆ ಆಯೋಜಿಸಿಕೊಟ್ಟಿರುತ್ತಾರೆ. ಹೊಸದುರ್ಗದ ‘ಗಣೇಶ ಸದನ’ ಸಂಸ್ಥೆಯ ಗಣೇಶೋತ್ಸವದಲ್ಲಿ ನಿರಂತರ ವೈಭವಯುತ ಮಂಟಪ, ವೇದಿಕೆ ನಿರ್ಮಿಸಿಕೊಡುತ್ತಾ ತಮ್ಮ ಅಪೂರ್ವ ಚಿತ್ರ ಹಾಗೂ ಶಿಲ್ಪಕಲಾ ಪ್ರಾವಿಣ್ಯತೆಯನ್ನು ಬಿಂಬಿಸಿರುತ್ತಾರೆ.


ವೈಶಿಷ್ಠ್ಯಮಯ ಬಣ್ಣದ ಪರಿ-ಸಿರಿಯ ಕಲಾಸಂಸ್ಥೆ - “ಚಿತ್ತಾ”

“ಚಿತ್ತಾ”- ಚಿತ್ತ ಅಂದರೆ ಮನಸ್ಸು, ಮನದಲ್ಲಿ ಅವಿರ್ಭಿವಿಸಿದ ಸೃಜನಶೀಲ ಕಲಾಸಿರಿಯನ್ನು ಮನಸ್ಸುಗಳಿಗೆ ತಲುಪಿಸಿ, ಕಣ್ಮನ ರಂಜಿಸಿ, ಅಹ್ಲಾದತೆಯನ್ನು ವಿಜೃಂಭಿಸುವುದೇ “ಚಿತ್ತಾ”ದ ಉದ್ದಾತ್ತಧ್ಯೇಯವಾಗಿದೆ, ಸಂಕಲ್ಪವಾಗಿದೆ, ಸಾಧನೆಯಾಗಿದೆ. ಈ ಮಹೋದ್ದೇಶದಿಂದ ರೂಪುಗೊಂಡ ‘ಚಿತ್ತಾ’ ಕಲಾಸಂಸ್ಥೆಯು “ಮನಸ್ಸಿನಿಂದ ಮನಸ್ಸು-ಮನಸ್ಸುಗಳಿಗಾಗಿ” ಎಂಬ ಧ್ಯೇಯವಾಕ್ಯವನ್ನೊಂದಿದೆ.

       8 ವರ್ಷಗಳ ಹಿಂದೆ ಕುಂಚ ಕಲೆಯಲ್ಲಿನ ಧೀಮಂತಿಕೆಯ ಇಚ್ಚಾಶಕ್ತಿಯಲ್ಲಿ ಬೆಂಗಳೂರಿಗೆ ಬಂದು, ಇಂದು ಖ್ಯಾತಿ  ಪಡೆದ ಒಬ್ಬ ಚಿತ್ರಕಲಾವಿದನ ಚೇತೋಹಾರಿಯಾದ ಬದುಕನ್ನು ಬಿಂಬಿಸುತ್ತಿದೆ-ಈ “ಚಿತ್ತಾ ಆರ್ಟ್ ಸ್ಟೂಡಿಯೋ”


ಶಿಲ್ಪರಚನೆಗಳನ್ನು ವೈಶಿಷ್ಟ್ಯವಾಗಿ ರೂಪಿಸಿ, ಕಲಾವಿದರೊಡನೆ ಬಿಂಬಿಸುತ್ತಾ, ದುಡಿಮೆ ಹಾಗೂ ಸಾಧನೆಗಾಗಿ ಬೆಂಗಳೂರಿನ ಮಹಾನಗರದಲ್ಲಿ ನೆಲೆನಿಂತು, ಕಲಾಭಿವ್ಯಕ್ತಿಗೊಳಿಸುತ್ತಾ ಇಂದು ಸ್ವಂತ ಕಲಾಕ್ಷೇತ್ರವನ್ನು ನಿರ್ಮಿಸಿಕೊಂಡು ಹಲವು ಕಲಾವಿದರ ಪ್ರಗತಿಗೆ ಮುನ್ನಡೆ ಬರೆಯುತ್ತಿರುವ ಶ್ರೀ ಎಂ.ಎಂ. ಜಿನೇಂದ್ರ ಜೈನ್ ಸಾಗರರವರು-ಕಲಾಸಂಸ್ಥೆಯ ಒಡೆಯರು.
     ಈ ಶಿಲ್ಪ ಮತ್ತು ಚಿತ್ರಕಲಾವಿದ ಜಿನೇಂದ್ರ ಜೈನ್ ಕಲಾಸೇವೆಯಲ್ಲಿ ಬೆಳೆದ ಪರಿಯಂತೂ ವೈವಿಧ್ಯಮಯವಾದುದು, ಈಗಾಗಿ ಶಿಲ್ಪ ಹಾಗೂ ಚಿತ್ರಕಲಾಕ್ಷೇತ್ರದ ತೈಲಚಿತ್ರ, ವರ್ಣಚಿತ್ರ, ರೇಖಾಚಿತ್ರ, ಉಬ್ಬು ಶಿಲ್ಪ್ಪ ಇತ್ಯಾದಿ ಎಲ್ಲಾಕ್ಷೇತ್ರಗಳಲ್ಲೂ ಕಲಾಕುಸುರಿ ತೋರಿಸುವುದು ಈ ಕಲಾವಿದನ ವೈಶಿಷ್ಠ್ಯವಾಗಿದೆ.

ರೇಖಾಚಿತ್ರ, ವರ್ಣಚಿತ್ರಗಳೊಂದಿಗೆ ಉಬ್ಬುಶಿಲ್ಪ, ಸ್ಥಿರ ಶಿಲ್ಪಗಳನ್ನು ರೂಪಿಸುವ ನಿಟ್ಟಿನಲ್ಲಿ ಪ್ರಾವೀಣ್ಯತೆಗಳಿಸುತ್ತಿದ್ದಾರೆ. ಈ ಪರಿಣಾಮವಾಗಿ ಸಮಾರಂಭಗಳಲಿ,್ಲ ಧಾರ್ಮಿಕ ಮಹೋತ್ಸವಗಳಲ್ಲಿ ವಿಶೇಷ ವರ್ಣಾ-ಕಲಾತ್ಮಕ ವೇದಿಕೆ,ಸೆಟ್ ನಿರ್ಮಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ. ಹಲವು ಚಲನಚಿತ್ರಗಳಿಗೂ ಸಂದರ್ಭೋಚಿತವಾಗಿ ಸೆಟ್ ನಿರ್ಮಿಸಿಕೊಟ್ಟಿರುವುದು ಹಾಗೂ ಉದಯ ಟಿ.ವಿ.ಯವರ ಹರಟೆ ಕಾರ್ಯಕ್ರಮಗಳಿಗಾಗಿ ವೇದಿಕೆ ನಿರ್ಮಿಸಿರುವುದು ಇವರ ಹೆಗ್ಗಳಿಕೆಯಾಗಿದೆ.

8 ವರ್ಷಗಳಿಂದ ಹಲವಾರು ಕಲಾಶಿಬಿರಗಳಲ್ಲಿ, ಕಲಾಪ್ರದರ್ಶನಗಳಲ್ಲಿ ಇವರ ಚಿತ್ತಾದಿಂದ ಮೂಡಿದ ಹಲವಾರು ಚಿತ್ರಕೃತಿಗಳು ಪ್ರದರ್ಶಿತಗೊಂಡು ನೋಡುಗರ ಕಣ್ಮನ ರಂಜಿಸಿ ಅಪಾರ ಪ್ರಶಂಸೆಗಳಿಸಿವೆ. ರಾಜ್ಯದ ಬಹುತೇಕ ಸ್ಥಳದ ಗಣೇಶೋತ್ಸವ ಇತ್ಯಾದಿ ಧಾರ್ಮಿಕ ಹಾಗೂ ರಾಷ್ಟ್ರೀಯ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಚಿತ್ತಾ ಸಂಸ್ಥೆಯಿಂದ ಮೂಡಿದ ಸಭಾಂಗಣ, ವೇದಿಕೆ ಇತ್ಯಾದಿಗಳು ನಾನಾರೀತಿಯ ಕಲಾಪ್ರಕಾರವನ್ನು ವೈಭವೀಕರಿಸಿದೆ.

 ಈ ಸಂಸ್ಥೆಯ ಶ್ರೀ ಎಂ.ಎಂ. ಜಿನೇಂದ್ರ ಜೈನ್ ರವರ ಕಲಾ ಪ್ರಾವಿಣ್ಯತೆಯು ಖ್ಯಾತಿಯ ಮೆಟ್ಟಿಲೇರುತಾ ಹಿರಿಯ ಚಿತ್ರಕಲಾವಿದರ, ಶಿಲ್ಪಕಲಾವಿದರ, ಹಲವಾರು ಚಿತ್ರಕಲಾಭಿಮಾನಿಗಳ ಅಭಿನಂದನೆಯ ಪಾತ್ರವಾಗಿದೆ. ಇವರ ಕಲಾಪ್ರತಿಭೆಯನ್ನು ಗಮನಿಸಿ ಮಾನ್ಯಗೊಳಿಸಿ ಉದಯ ಟಿ.ವಿ. ಮತ್ತು ಚಂದನ ರಾಷ್ಟ್ರೀಯ ಚಾನೆಲ್ ಗಳವರು ಇತ್ತೀಚೆಗೆ ಇವರ ವಿಸ್ತøತ ಸಂದರ್ಶನ ನಡೆಸಿಕೊಟ್ಟಿರುವುದು ಹೆಮ್ಮೆಯ ವಿಷಯವಾಗಿದೆ.

      ಇತ್ತೀಚೆಗೆ ಇವರು ಬೆಂಗಳೂರು ಮೆಟ್ರೋದ ಕಟ್ಟಡಕ್ಕೆ ರೂಪಿಸಿದ ಡಿಜಿಟಲ್ ವಿನ್ಯಾಸವು ಹಿಂದಿನ ರಾಜಾಳ್ವಿಕೆಯ ಪರಂಪರೆಯ ಕಟ್ಟಡವಿನ್ಯಾಸದಲ್ಲಿ ವೈಭವೀಕರಿಸಿಕೊಂಡಿರುವುದು ಬಹು ಪ್ರಶಂಸೆಗೊಳಗಾಗಿದೆ.

  ಬೆಂಗಳೂರು ಅರಮನೆ ಮೈದಾನದಲ್ಲಿ ನಿರ್ಮಿಸಿದ 125 ಅಡಿಯ ಶ್ರೀ ಧನ್ವಂತರಿ ಮಾತೆಯ ಬೃಹತ್ ಶಿಲ್ಪವು, ಶ್ರೀ ಜಿನೇಂದ್ರ ಜೈನ್ ರವರ ಅದ್ಬುತ ಕಲಾ ನೈಪುಣ್ಯತೆಯಲ್ಲಿ ತೋರ್ಪಡಿಸಿ ಕಲಾಸೇವೆಯಲ್ಲಿ ತೊಡಗಿಸಿಕೊಂಡ ಇವರ ಇಚ್ಚಾಶಕ್ತಿಯನ್ನು ಸಾಧನೆಯ ಗುಣಗಳನ್ನು ವ್ಯಕ್ತಪಡಿಸುತ್ತದೆ.


ಚಿತ್ತ ಜಿನೇಂದೃ ರವರ ಪ್ರಮುಖ ಸೆಟ್ ವರ್ಕ್ ಗಳು
    

  ಕೆಲವು ಬೃಹತ್ ಶಿಲ್ಪಗಳು 

 * ಕೆಲವು ಸ್ತಬ್ಧ ಚಿತ್ರಗಳು
         ಸ್ತಬ್ದಚಿತ್ರ ಮೈಸೂರು ದಸರಾ
         ಮಹಾವೀರ ಜಯಂತಿ











  






ಕೆಲವು ಕಲಾವಿಮರ್ಷೆ ಗಳು






4 comments:

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...