ಚಿತ್ತಾ ಆರ್ಟ ಸ್ಟುಡಿಯೂ

Chittha art Studio
 
ವೈಶಿಷ್ಠ್ಯಮಯ ಬಣ್ಣದ ಪರಿ-ಸಿರಿಯ ಕಲಾಸಂಸ್ಥೆ - “ಚಿತ್ತಾ”

“ಚಿತ್ತಾ”- ಚಿತ್ತ ಅಂದರೆ ಮನಸ್ಸು, ಮನದಲ್ಲಿ ಅವಿರ್ಭಿವಿಸಿದ ಸೃಜನಶೀಲ ಕಲಾಸಿರಿಯನ್ನು ಮನಸ್ಸುಗಳಿಗೆ ತಲುಪಿಸಿ, ಕಣ್ಮನ ರಂಜಿಸಿ, ಅಹ್ಲಾದತೆಯನ್ನು ವಿಜೃಂಭಿಸುವುದೇ “ಚಿತ್ತಾ”ದ ಉದ್ದಾತ್ತಧ್ಯೇಯವಾಗಿದೆ, ಸಂಕಲ್ಪವಾಗಿದೆ, ಸಾಧನೆಯಾಗಿದೆ. ಈ ಮಹೋದ್ದೇಶದಿಂದ ರೂಪುಗೊಂಡ ‘ಚಿತ್ತಾ’ ಕಲಾಸಂಸ್ಥೆಯು “ಮನಸ್ಸಿನಿಂದ ಮನಸ್ಸು-ಮನಸ್ಸುಗಳಿಗಾಗಿ” ಎಂಬ ಧ್ಯೇಯವಾಕ್ಯವನ್ನೊಂದಿದೆ.

 8 ವರ್ಷಗಳ ಹಿಂದೆ ಕುಂಚ ಕಲೆಯಲ್ಲಿನ ಧೀಮಂತಿಕೆಯ ಇಚ್ಚಾಶಕ್ತಿಯಲ್ಲಿ ಬೆಂಗಳೂರಿಗೆ ಬಂದು, ಇಂದು ಖ್ಯಾತಿ  ಪಡೆದ ಒಬ್ಬ ಚಿತ್ರಕಲಾವಿದನ ಚೇತೋಹಾರಿಯಾದ ಬದುಕನ್ನು ಬಿಂಬಿಸುತ್ತಿದೆ-ಈ “ಚಿತ್ತಾ ಆರ್ಟ್ ಸ್ಟೂಡಿಯೋ”

ಶಿಲ್ಪರಚನೆಗಳನ್ನು ವೈಶಿಷ್ಟ್ಯವಾಗಿ ರೂಪಿಸಿ, ಕಲಾವಿದರೊಡನೆ ಬಿಂಬಿಸುತ್ತಾ, ದುಡಿಮೆ ಹಾಗೂ ಸಾಧನೆಗಾಗಿ ಬೆಂಗಳೂರಿನ ಮಹಾನಗರದಲ್ಲಿ ನೆಲೆನಿಂತು, ಕಲಾಭಿವ್ಯಕ್ತಿಗೊಳಿಸುತ್ತಾ ಇಂದು ಸ್ವಂತ ಕಲಾಕ್ಷೇತ್ರವನ್ನು ನಿರ್ಮಿಸಿಕೊಂಡು ಹಲವು ಕಲಾವಿದರ ಪ್ರಗತಿಗೆ ಮುನ್ನಡೆ ಬರೆಯುತ್ತಿರುವ ಶ್ರೀ ಎಂ.ಎಂ. ಜಿನೇಂದ್ರ ಜೈನ್ ಸಾಗರರವರು-ಕಲಾಸಂಸ್ಥೆಯ ಒಡೆಯರು.

 ಈ ಶಿಲ್ಪ ಮತ್ತು ಚಿತ್ರಕಲಾವಿದ ಜಿನೇಂದ್ರ ಜೈನ್ ಕಲಾಸೇವೆಯಲ್ಲಿ ಬೆಳೆದ ಪರಿಯಂತೂ ವೈವಿಧ್ಯಮಯವಾದುದು, ಈಗಾಗಿ ಶಿಲ್ಪ ಹಾಗೂ ಚಿತ್ರಕಲಾಕ್ಷೇತ್ರದ ತೈಲಚಿತ್ರ, ವರ್ಣಚಿತ್ರ, ರೇಖಾಚಿತ್ರ, ಉಬ್ಬು ಶಿಲ್ಪ್ಪ ಇತ್ಯಾದಿ ಎಲ್ಲಾಕ್ಷೇತ್ರಗಳಲ್ಲೂ ಕಲಾಕುಸುರಿ ತೋರಿಸುವುದು ಈ ಕಲಾವಿದನ ವೈಶಿಷ್ಠ್ಯವಾಗಿದೆ.

ರೇಖಾಚಿತ್ರ, ವರ್ಣಚಿತ್ರಗಳೊಂದಿಗೆ ಉಬ್ಬುಶಿಲ್ಪ, ಸ್ಥಿರ ಶಿಲ್ಪಗಳನ್ನು ರೂಪಿಸುವ ನಿಟ್ಟಿನಲ್ಲಿ ಪ್ರಾವೀಣ್ಯತೆಗಳಿಸುತ್ತಿದ್ದಾರೆ. ಈ ಪರಿಣಾಮವಾಗಿ ಸಮಾರಂಭಗಳಲಿ,್ಲ ಧಾರ್ಮಿಕ ಮಹೋತ್ಸವಗಳಲ್ಲಿ ವಿಶೇಷ ವರ್ಣಾ-ಕಲಾತ್ಮಕ ವೇದಿಕೆ,ಸೆಟ್ ನಿರ್ಮಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ. ಹಲವು ಚಲನಚಿತ್ರಗಳಿಗೂ ಸಂದರ್ಭೋಚಿತವಾಗಿ ಸೆಟ್ ನಿರ್ಮಿಸಿಕೊಟ್ಟಿರುವುದು ಹಾಗೂ ಉದಯ ಟಿ.ವಿ.ಯವರ ಹರಟೆ ಕಾರ್ಯಕ್ರಮಗಳಿಗಾಗಿ ವೇದಿಕೆ ನಿರ್ಮಿಸಿರುವುದು ಇವರ ಹೆಗ್ಗಳಿಕೆಯಾಗಿದೆ.

8 ವರ್ಷಗಳಿಂದ ಹಲವಾರು ಕಲಾಶಿಬಿರಗಳಲ್ಲಿ, ಕಲಾಪ್ರದರ್ಶನಗಳಲ್ಲಿ ಇವರ ಚಿತ್ತಾದಿಂದ ಮೂಡಿದ ಹಲವಾರು ಚಿತ್ರಕೃತಿಗಳು ಪ್ರದರ್ಶಿತಗೊಂಡು ನೋಡುಗರ ಕಣ್ಮನ ರಂಜಿಸಿ ಅಪಾರ ಪ್ರಶಂಸೆಗಳಿಸಿವೆ. ರಾಜ್ಯದ ಬಹುತೇಕ ಸ್ಥಳದ ಗಣೇಶೋತ್ಸವ ಇತ್ಯಾದಿ ಧಾರ್ಮಿಕ ಹಾಗೂ ರಾಷ್ಟ್ರೀಯ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಚಿತ್ತಾ ಸಂಸ್ಥೆಯಿಂದ ಮೂಡಿದ ಸಭಾಂಗಣ, ವೇದಿಕೆ ಇತ್ಯಾದಿಗಳು ನಾನಾರೀತಿಯ ಕಲಾಪ್ರಕಾರವನ್ನು ವೈಭವೀಕರಿಸಿದೆ.

 ಈ ಸಂಸ್ಥೆಯ ಶ್ರೀ ಎಂ.ಎಂ. ಜಿನೇಂದ್ರ ಜೈನ್ ರವರ ಕಲಾ ಪ್ರಾವಿಣ್ಯತೆಯು ಖ್ಯಾತಿಯ ಮೆಟ್ಟಿಲೇರುತಾ ಹಿರಿಯ ಚಿತ್ರಕಲಾವಿದರ, ಶಿಲ್ಪಕಲಾವಿದರ, ಹಲವಾರು ಚಿತ್ರಕಲಾಭಿಮಾನಿಗಳ ಅಭಿನಂದನೆಯ ಪಾತ್ರವಾಗಿದೆ. ಇವರ ಕಲಾಪ್ರತಿಭೆಯನ್ನು ಗಮನಿಸಿ ಮಾನ್ಯಗೊಳಿಸಿ ಉದಯ ಟಿ.ವಿ. ಮತ್ತು ಚಂದನ ರಾಷ್ಟ್ರೀಯ ಚಾನೆಲ್ ಗಳವರು ಇತ್ತೀಚೆಗೆ ಇವರ ವಿಸ್ತøತ ಸಂದರ್ಶನ ನಡೆಸಿಕೊಟ್ಟಿರುವುದು ಹೆಮ್ಮೆಯ ವಿಷಯವಾಗಿದೆ.

 ಇತ್ತೀಚೆಗೆ ಇವರು ಬೆಂಗಳೂರು ಮೆಟ್ರೋದ ಕಟ್ಟಡಕ್ಕೆ ರೂಪಿಸಿದ ಡಿಜಿಟಲ್ ವಿನ್ಯಾಸವು ಹಿಂದಿನ ರಾಜಾಳ್ವಿಕೆಯ ಪರಂಪರೆಯ ಕಟ್ಟಡವಿನ್ಯಾಸದಲ್ಲಿ ವೈಭವೀಕರಿಸಿಕೊಂಡಿರುವುದು ಬಹು ಪ್ರಶಂಸೆಗೊಳಗಾಗಿದೆ.

  ಬೆಂಗಳೂರು ಅರಮನೆ ಮೈದಾನದಲ್ಲಿ ನಿರ್ಮಿಸಿದ 125 ಅಡಿಯ ಶ್ರೀ ಧನ್ವಂತರಿ ಮಾತೆಯ ಬೃಹತ್ ಶಿಲ್ಪವು, ಶ್ರೀ ಜಿನೇಂದ್ರ ಜೈನ್ ರವರ ಅದ್ಬುತ ಕಲಾ ನೈಪುಣ್ಯತೆಯಲ್ಲಿ ತೋರ್ಪಡಿಸಿ ಕಲಾಸೇವೆಯಲ್ಲಿ ತೊಡಗಿಸಿಕೊಂಡ ಇವರ ಇಚ್ಚಾಶಕ್ತಿಯನ್ನು ಸಾಧನೆಯ ಗುಣಗಳನ್ನು ವ್ಯಕ್ತಪಡಿಸುತ್ತದೆ.

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...